dailyvideo

Bahiranga Patra

HTML clipboard

ಲಂಚಾವತಾರಕ್ಕೆ ಕೊನೆಯಿಲ್ಲವೇ?

ಸಾರ್ವಜನಿಕ ವಲಯದ ಸರಕಾರಿ ಉದ್ಯಮಗಳಲ್ಲಿನ, ಕೈಗಾರಿಕೆಗಳಲ್ಲಿನ, ಪೆಟ್ರೋಲಿಂ ರಿಫೈನರಿಗಳಲ್ಲಿನ, ವಿಶೇಷ ಸಂಸ್ಥೆಗಳಲ್ಲಿರುವ ಲಂಚವತಾರ, ಭ್ರಷ್ಟಾಚಾರವನ್ನು ತಖೆ ಮಾಡುವ ಕೆಲವೊಂದು ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ, ಲಂಚಾವತಾರಿ ಉನ್ನತ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ

ಓರ್ವ ನಿರುದ್ಯೋಗಿ, ಮಂಗಳೂರು
ಜಿಲ್ಲೆಯಲ್ಲಿನ ಸಾರ್ವಜನಿಕ ವಲಯದ ಸರಕಾರಿ ಹಣಕಾಸು ಸಂಸ್ಥೆಗಳಲ್ಲಿ, ಉದ್ಯಮಗಳಲ್ಲಿ, ಪೆಟ್ರೋಲಿಯಂ ರಿಫೈನರಿಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಲಂಚವತಾರ ಹಾಗೂ ಭ್ರಷ್ಟಾಚಾರ ಮುಗಿಲುಮುಟ್ಟಿದೆ.
ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಕೈಗಾರಿಕೆಗಳಲ್ಲಿನ, ಪೆಟ್ರೋಲಿಯಂ ರಿಫೈನರಿಗಳಲ್ಲಿನ, ವಿಶೇಷ ಸಂಸ್ಥೆಗಳಲ್ಲಿನ ಕೆಲವೊಂದು ಮಾನವ ಸಂಪನ್ಮೂಲ ವಿಭಾಗ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಅಧಿಕಾರಿಗಳು ತಮ್ಮ ಸಂಸ್ಥೆಗಳಲ್ಲಿನ ಹುದ್ದೆಗಳನ್ನು ತುಂಬಲು ಸರಕಾರಿ ಉದ್ಯೋಗ ನೀಡಲು, ನೇರ ಉದ್ಯೋಗ ನೀಡಲು ಉದ್ಯೋಗಾಂಕ್ಷಿಗಳಿಂದ, ನಿರು ದ್ಯೋಗಿಗಳಿಂದ ವಿವಿಧ ಮೂಲದ ಹಣಕಾಸು, ವಿವಿಧ ರೀತಿಯ ಉಡುಗೊರೆಗಳನ್ನು ಕೇಳಲು ಹಿಂದೇಟು ಹಾಕುವುದಿಲ್ಲ. ಇದ ಕ್ಕಾಗಿಯೇ ಮಧ್ಯವರ್ತಿಗಳನ್ನು, ಏಜೆಂಟರನ್ನು ಕುಟುಂಬ ಸದಸ್ಯ ರನ್ನಾಗಿ ನೇಮಿಸುತ್ತಾರೆ.
ಸ್ಥಳೀಯರಿಗೆ ಹಾಗೂ ನಿರ್ವಸಿತರಿಗೆ ದೊರಕಬೇಕಾದ, ನೀಡಬೇಕಾದ ಹುದ್ದೆಗಳನ್ನು ನೇರ ಉದ್ಯೋಗವನ್ನು ಗೌಪ್ಯವಾಗಿ ಮಾಡಲಾಗುತ್ತಿದೆ. ಸಾರ್ವಜನಿಕ ವಲಯದ ಸರಕಾರಿ ಉದ್ಯಮ, ಕೈಗಾರಿಕೆ, ಪೆಟ್ರೋಲಿಯಂ, ರಿಫೈನರಿ ವಿಶೇಷ ಸಂಸ್ಥೆಗಳಲ್ಲಿ ಗುತ್ತಿಗೆ ದಾರರು ಹೊಸ ಕಾಮಗಾರಿ ಪಡೆಯಲು, ಬಿಲ್ ಅನ್ನು ಮಂಜೂರು ಮಾಡಿಸಲು ಶೇ.೧೦ರಷ್ಟು ಕಮೀಷನ್ ಅಥವಾ ಬೆಲೆಬಾಳುವ ಉಡುಗೊರೆಗಳನ್ನು ಕೆಲವೊಂದು ಅಧಿಕಾರಿಗಳಿಗೆ ನೀಡಬೇಕಾಗಿದೆ. ಗುತ್ತಿಗೆದಾರರ ಕೆಲವೊಂದು ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾದಲ್ಲಿ ಲಕ್ಷ ರೂ.ಗಳ ದಂಡ ತೆರಬೇಕಾಗಿದೆ. ಕಾಮಗಾರಿ ಮುಗಿಸಿದ ಗುತ್ತಿಗೆದಾರರು ಬಿಲ್ ಮಂಜೂರು ಮಾಡಲು ಅಧಿಕಾರಿಗಳಿಗೆ ಲಂಚವನ್ನು ನೀಡಬೇಕಾಗುತ್ತದೆ.
ಸಾರ್ವಜನಿಕ ವಲಯದ ಸರಕಾರಿ ಉದ್ಯಮಗಳಲ್ಲಿನ, ಕೈಗಾರಿ ಕೆಗಳಲ್ಲಿನ, ಪೆಟ್ರೋಲಿಂ ರಿಫೈನರಿಗಳಲ್ಲಿನ, ವಿಶೇಷ ಸಂಸ್ಥೆಗಳಲ್ಲಿರುವ ಲಂಚಾವತಾರ, ಭ್ರಷ್ಟಾಚಾರವನ್ನು ತನಿಖೆ ಮಾಡುವ ಕೆಲವೊಂದು ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯು ತ್ತಿದ್ದಾರೆ.
ತನಿಖೆಯೆಂಬ ನಾಟಕ ನಡೆಸಿ ಸಣ್ಣ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿದ್ದಾರೆ. ಕೆಲವೊಂದು ಅಧಿಕಾರಿಗಳಿಗೆ ಲಂಚವಾತಾರ ಹಾಗೂ ಭ್ರಷ್ಟಾಚಾರವನ್ನು ಮಾಡುವುದಕ್ಕೂ ಸಹಾಯಕವಾಗುತ್ತಿದ್ದಾರೆ. ಲಂಚಾವಾತಾರ, ಭ್ರಷ್ಟಾಚಾರದ ನಗದು ಹಣವನ್ನು ಸಾರ್ವಜನಿಕ ವಲಯದ ಸರಕಾರಿ ಸಂಸ್ಥೆಗಳ, ಉದ್ಯಮಗಳ, ಪೆಟ್ರೋಲಿಂ ರಿಫೈನರಿಗಳ ಕೆಲವೊಂದು ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರ, ಶಾಪಿಂಗ್ ಮಾಲ್ ಕಟ್ಟಡಗಳ ನಿರ್ಮಾಣದಲ್ಲಿ ಸಂಸ್ಥೆಗಳ ಹತ್ತಿರ ಇರುವ ಗ್ರಾಮಗಳ ಭೂಮಿಯಲ್ಲಿನ ಭೂವ್ಯವಹಾರದಲ್ಲಿ, ಬೆಲೆಬಾಳುವ ಬಂಗಾರ, ವಜ್ರ, ಮಾಣಿಕ್ಯಗಳಲ್ಲಿ, ಐಷಾರಾಮಿ ಬಂಗಲೆಗಳನ್ನು ಕೊಳ್ಳುವುದಕ್ಕೆ ಶೇರು-ಡಿಬೆಂಚರುಗಳಲ್ಲಿ, ಮಕ್ಕಳ ಉನ್ನತ ಶಿಕ್ಷಣದ ಡೊನೇಷನ್‌ಗಾಗಿ ಸಿಮೆಂಟ್ ಕೈಗಾರಿಕೆ, ಪಾಮೋಲಿವ್ ಎಣ್ಣೆ ಉತ್ಪನ್ನಗಳಲ್ಲಿ, ಚಾ, ಕಾಫಿ, ಕೋಕೋ, ಎಲಕ್ಕಿ ಎಸ್ಟೇಟ್ ಇತ್ಯಾದಿ ಗಳಲ್ಲಿ ಕುಟುಂಬದ ಸದಸ್ಯರ ಹೆಸರಿನಲ್ಲಿ, ಬೇನಾಮಿ ಹೆಸರಿನಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ, ಅನ್ಯರಾಜ್ಯದಲ್ಲಿ, ಪರದೇಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದ.ಕ.ಜಿಲ್ಲೆಯಲ್ಲಿಯೇ ಭ್ರಷ್ಟಾಚಾರದ ಹಣ ಚಲಾವಣೆಯಾಗುತ್ತಿದೆ, ಕೆಟ್ಟ ದಂಧೆಯು ನಡೆಯುತ್ತಿದೆ. ಸಾರ್ವಜನಿಕ ವಲಯದ ಸರಕಾರಿ ಉದ್ಯಮಗಳಲ್ಲಿನ, ಕೈಗಾರಿಕೆಗಳಲ್ಲಿನ, ಪೆಟ್ರೋ ಲಿಯಂ ರಿಫೈನರಿಗಳಲ್ಲಿ, ಸಂಸ್ಥೆಗಳಲ್ಲಿನ ಉನ್ನತಾಧಿಕಾರಿಗಳ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳ ಹಣಕಾಸು ವ್ಯವ ಹಾರವನ್ನು ವಿಶೇಷ ಕೇಂದ್ರೀಯ ಸರಕಾರಿ ತನಿಖಾದಳ ದಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ.

Recent Entries

Recent Comments

Photo Gallery