dailyvideo

Nimminda

HTML clipboard

ಹಾರುಬೂದಿ ಸಮಸ್ಯೆಗೆಂದು ಕೊನೆ?
ನಾಗಾರ್ಜುನ ಹಾರುಬೂದಿ ಸ್ಥಾವರದ ವಿರುದ್ಧ ಸಭಾಪತಿ, ಪೇಜಾವರ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಈ ಪ್ರತಿಭಟನೆಯನ್ನು ಕೇವಲ ಜನರ ದಿಕ್ಕನ್ನು ತಪ್ಪಿಸುವುದಕ್ಕಾಗಿ ಮಾಡುತ್ತಿದ್ದಾರೆಯೇ ಎಂಬ ಸಂಶ ಯವೂ ಮೂಡುತ್ತದೆ. ಯಾಕೆಂದರೆ ಪೇಜಾವರ ಶ್ರೀಗಳು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ತಿಂಗಳ ಹಿಂದೆ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ್ದ ಶ್ರೀಗಳು ಅಲ್ಲಿಯ ಬಾವಿ ನೀರನ್ನು ಕುಡಿದು ಹೋರಾಟದ ಮಾತಾಡಿದರೆ, ಕೆಲವು ದಿನಗಳು ಕಳೆದ ಬಳಿಕ ಬೇರೆಯೇ ಮಾತಾಡುತ್ತಿದ್ದಾರೆ. ಹೀಗಾದರೆ ಇವರನ್ನು ನಂಬಿ ಹೋರಾಟದಲ್ಲಿ ಭಾಗವಹಿಸುವುದು ಸಾಧ್ಯವೇ?
ಸಭಾಪತಿ ನೇತೃತ್ವದಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿತ್ತಾದರೂ ಕೆಲವೇ ದಿನಗಳಲ್ಲಿ ಬಂದ್ ಕರೆಯನ್ನು ಹಿಂಪಡೆಯಲಾಗಿದೆ. ರೈತ ಸಂಘದ ಪದಾಧಿಕಾರಿಗಳು ಆಗಾಗ ಒಟ್ಟು ಸೇರಿ ಚರ್ಚಿಸುತ್ತಾರೆ, ಆದರೆ ಹೋರಾಟದ ಹಾದಿ ಏನಾಯಿತು ಎಂದು ತಿಳಿಯುತ್ತಿಲ್ಲ. ರೈತ ಸಂಘದವರಾದರೂ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬಾರದು.
ನಾಗರಾಜ್, ಪಡುಬಿದ್ರಿ

ಮಂಗಳೂರಿಗರಿಗೆ ಪಾರ್ಕ್ ಬೇಕು
ಮಂಗಳೂರು ಮಹಾನಗರದಲ್ಲಿ ವಾಸಿಸುವ ಜನರಿಗೆ ಅಗತ್ಯವಾದ ಹೆಚ್ಚಿನ ವ್ಯವಸ್ಥೆಗಳನ್ನು ಜಿಲ್ಲಾಡಳಿತ, ನಗರಪಾಲಿಕೆ ಕಲ್ಪಿಸಿದೆ. ಆದರೆ ತೋಟಗಾರಿಕಾ ಇಲಾಖೆಯ ವತಿಯಿಂದ ಇರುವ ಬೆರಳೆಣಿಕೆಯ ಪಾರ್ಕ್‌ಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲು ಮಾತ್ರ ಮನಪಾ ಕಾರ್ಯೋನ್ಮುಖವಾಗಿಲ್ಲ. ನಗರದ ಕದ್ರಿ ಪಾರ್ಕ್, ಟಾಗೋರ್ ಪಾರ್ಕ್ ಹೊರತುಪಡಿಸಿದರೆ ಇನ್ನುಳಿದ ಪಾರ್ಕ್‌ಗಳತ್ತ ಆಡಳಿತ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಪಾರ್ಕ್‌ಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸೊರಗುತ್ತಿವೆ. ಮಹಾನಗರ ಪಾಲಿಕೆಯ ನೂತನ ಮೇಯರ್ ನಗರದ ಪಾರ್ಕ್‌ಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ವಾರಾಂತ್ಯದ ದಿನವನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯಲು ಯೋಗ್ಯ ಪಾರ್ಕ್ ಇಲ್ಲಿಲ್ಲ. ಆದ್ದರಿಂದ ಮಂಗಳೂರಿನ ಜನತೆಗೆ ಅಗತ್ಯವಾಗಿ ಸುಸಜ್ಜಿತವಾದ ಪಾರ್ಕ್ ಅನ್ನು ನಿರ್ಮಿಸಲು ಜನಪ್ರತಿನಿಧಿಗಳು, ಮನಪಾ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ರಮೇಶ್, ಯೆಯ್ಯಾಡಿ

ಇಂಥ ಪ್ರಚಾರ ಬೇಕಿತ್ತೇ?
ತುಳು ಭಾಷೆಯ ೪೦ನೇ ಚಿತ್ರವಾಗಿ ಬಿಡುಗಡೆಗೊಂಡಿರುವ ‘ಕಂಚಿಲ್ದ ಬಾಲೆ’ ಚೆನ್ನಾಗಿ ಮೂಡಿಬಂದಿದೆ ಎನ್ನಲಡ್ಡಿ ಯಿಲ್ಲ. ಆದರೆ ನಿರ್ದೇಶಕರು ಇನ್ನೂ ಸ್ವಲ್ಪ ಪ್ರಯತ್ನಪಟ್ಟಿದ್ದರೆ ಚಿತ್ರವನ್ನು ಮತ್ತ ಷ್ಟು ಚೆನ್ನಾಗಿ ಮಾಡಬಹುದಿತ್ತು ಎಂಬುದು ಚಿತ್ರ ನೋಡಿದ ಎಲ್ಲರಿಗೂ ತಿಳಿಯು ತ್ತದೆ. ಶಕುಂತಳಾ ಶೆಟ್ಟಿ, ಚರಿತ್ರಾ ಹೆಗ್ಡೆ ಚೆನ್ನಾಗಿ ನಟಿಸಿದ್ದರೂ ಚಿತ್ರದಲ್ಲಿ ಕೆಲ ವೊಂದು ದೃಶ್ಯಾವಳಿಗಳನ್ನು ಅನಗತ್ಯ ವಾಗಿ ತುರುಕಿಸಿದಂತಿದೆ. ಮುತ್ತಪ್ಪ ರೈ ಅವರನ್ನು ಚಿತ್ರದಲ್ಲಿ ತೋರಿ ಸಿರುವುದು ಪ್ರಚಾರದ ದೃಷ್ಟಿಯಿಂದ ಸರಿ ಎನ್ನಬಹುದಾದರೂ ತುಳು ನಾಡಿನ ನಂಬಿಕೆಯನ್ನು ಸೊಗಸಾಗಿ ಬಿಂಬಿಸುವ ಕಂಚಿಲ್ದ ಬಾಲೆ ಚಿತ್ರದಲ್ಲಿ ಇವರ ಪಾತ್ರ ಅಷ್ಟೇನೂ ಅಗತ್ಯ ಎಂದೆನಿಸುವುದಿಲ್ಲ.
ಕನ್ನಡ ಸಂಘಟನೆ ಯೊಂದರ ಸಂಸ್ಥಾಪಕರನ್ನು ತುಳು ಸಿನಿಮಾದಲ್ಲಿ ತೋರಿಸಿ ಸಂಘಟನೆಯ ಪರ ಪ್ರಚಾರ ಮಾಡಿರುವುದು ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ.
ಪ್ರಾದೇಶಿಕ ಭಾಷಾ ಚಿತ್ರಕ್ಕೆ ಕೊಡ ಮಾಡುವ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಇಂತಹ ದೃಶ್ಯಗಳು ತಡೆಯಾಗಲೂಬಹುದು. ಇನ್ನಾ ದರೂ ಚಿತ್ರ ನಿರ್ದೇಶಕರು ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಿ ಸಿನಿಮಾ ನಿರ್ಮಿಸಲಿ.
ಪ್ರಶಾಂತ್ ಎಂ, ಪುತ್ತೂರು

ಭೂಕಂಪ-ಸುನಾಮಿ ಪ್ರಕೃತಿ ಕಲಿಸುವ ಪಾಠವೇ?
ಶಾಂತವಾಗಿರುವ ಸಮುದ್ರ ನೋಡುತ್ತಿದ್ದಂತೆಯೇ ಉಗ್ರ ಸ್ವರೂಪ ತಾಳುತ್ತದೆ ಎನ್ನುವುದು ನಾವು ಯೋಚಿಸಲೇ ಬೇಕಾದ ಸಂಗತಿ. ಮೊನ್ನೆ ಜಪಾನ್‌ನಲ್ಲಿ ನಡೆದ ಸುನಾಮಿ ಯಿಂದಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ. ಇಷ್ಟು ಮಾತ್ರವಲ್ಲದೆ, ನೂರಾರು ವಾಹನಗಳು, ಲಘು ವಿಮಾನಗಳು ಕಸದ ರಾಶಿಯಂತೆ ತೇಲಿ ಹೋಗಿವೆ. ಇಷ್ಟೊಂದು ಭೀಕರ ಸುನಾಮಿಯಿಂದ ಚೇತರಿಸಲು ಜಪಾನ್‌ಗೆ ಹಲವು ಸಮಯ ಬೇಕಾಗ ಬಹುದೆಂದು ಅಂದಾಜಿಸಲಾಗಿತ್ತು. ಆದರೆ ಕೇವಲ ಎರಡೇ ವಾರದಲ್ಲಿ ಚೇತರಿಕೆ ಕಂಡು ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತಿದೆ ಸಮೃದ್ಧ ಭರಿತ ದೇಶ ಜಪಾನ್. ನಮ್ಮ ದೇಶದಲ್ಲೇನಾದರೂ ಇಂತಹ ಭೂಕಂಪ ಸಂಭವಿಸುತ್ತಿದ್ದರೆ ನಾವು ಚೇತರಿಸಿಕೊಳ್ಳಲು ವರ್ಷಗಟ್ಟಲೆ ಸಮಯ ಬೇಕಾಗುತ್ತಿತ್ತೋ ಏನೋ? ಇನ್ನು ನಾವು ಇತರ ದೇಶದ ಸಹಾಯ ಬೇಡುತ್ತಿದ್ದುದರಲ್ಲಿ ಸಂದೇಹವಿಲ್ಲ.
ಆದರೆ ಮಾನವನ ಸ್ವಾರ್ಥಕ್ಕಾಗಿ ದೇವರು ಕೊಡುವ ಪ್ರತಿಫಲವೇ ಇಂತಹ ಪ್ರಕೃತಿ ವಿಕೋಪಗಳು ಎಂದರೆ ತಪ್ಪಾಗಲಾರದು. ಯಾವ ಶ್ರೀಮಂತನೇ ಆಗಲಿ, ಬಡವನೇ ಆಗಲಿ, ಪ್ರಕೃತಿ ವಿಕೋಪ ನಡೆದಾಗ ಎಲ್ಲರೂ ಸಮಾನರು. ಆದ್ದರಿಂದ ಅಹಂಕಾರಿಗಳಾದ ನಾವು ಇನ್ನಾದರೂ ಸ್ವಲ್ಪ ಯೋಚಿಸುವುದೊಳಿತು.
ನೋಣಯ್ಯ ಕೈಲಾರು, ಮೂಡನಡುಗೋಡು

ಕೇಂದ್ರ ಗ್ರಂಥಾಲಯದ ಅವ್ಯವಸ್ಥೆ
ಬಿರುಕು ಬಿಟ್ಟ ಕಟ್ಟಡ.. ಶಿಥಿಲ ಗೊಂಡ ಕಾಂಕ್ರೀಟ್ ಮೇಲ್ಛಾವಣಿ... ಇದು ನಗರದ ಬಾವುಟಗುಡ್ಡೆ ಯಲ್ಲಿ ರುವ ಕೇಂದ್ರ ಗ್ರಂಥಾಲಯದ ದುಸ್ಥಿತಿ. ಜ್ಞಾನಾರ್ಜನೆಗಾಗಿ ಈ ಗ್ರಂಥಾಲಯದ ಒಳ ಹೊಕ್ಕರೆ ಇಲ್ಲಿನ ದುಸ್ಥಿತಿಯ ಅರಿವಾಗುತ್ತದೆ.
ಪುಸ್ತಕ ಪ್ರಿಯರ ಉಪಯೋಗ ಕ್ಕಾಗಿ ಸರ್ಕಾರವೇನೋ ಈ ಗ್ರಂಥಾ ಲಯವನ್ನು ನಿರ್ಮಿಸಿ ಕೊಟ್ಟಿದೆ. ತದ ನಂತರ ಇತ್ತ ಕಣ್ಣೆತ್ತಿ ಯೂ ನೋಡಿ ದಂತಿಲ್ಲ. ಈ ಕಟ್ಟಡ ಮೇಲ್ನೋಟಕ್ಕೆ ಭದ್ರವಾಗಿ ಕಂಡರೂ, ಇದರ ನಿಜ ರೂಪ ಬಯ ಲಾಗು ವುದು ಒಳಹೊಕ್ಕಾಗಲೇ. ಗ್ರಂಥಾ ಲಯದ ಮೇಲ್ಭಾಗ ಬಿರುಕು ಬಿಟ್ಟಿದ್ದು, ತುಕ್ಕು ಹಿಡಿದ ಕಬ್ಬಿಣದ ರಾಡ್‌ಗಳು ಎದ್ದು ಕಾಣುತ್ತಿವೆ. ಇಂತಹ ಚಿತ್ರಣ ಗ್ರಂಥಾ ಲಯದ ಮೂಲೆ ಮೂಲೆಯಲ್ಲೂ ಕಾಣ ಸಿಗುತ್ತದೆ.
 ಅಲ್ಲದೇ ಇಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ಕೂಡ ಎದ್ದು ಕಾಣುತ್ತದೆ. ಹೊರಗೆ ಬಂದರೆ ಅಲ್ಲಿನ ದುಸ್ಥಿತಿ ಒಳಗಿ ನದಕ್ಕಿಂತ ಭಿನ್ನವೇನಲ್ಲ, ಕಟ್ಟಡದ ಗೋಡೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಧರೆಗುರುಳಲು ಮೀನ-ಮೇಷ ಎನಿಸುವಂತಿದೆ. ಇನ್ನು ಇದು ನಗರದ ಹೃದಯ ಭಾಗದಲ್ಲಿರುವ ಕೇಂದ್ರ ಗ್ರಂಥಾಲಯವಾದರೂ ಇಲ್ಲಿ ಪುಸ್ತಕಗಳ ಸಂಖ್ಯೆ ಮಾತ್ರ ಬಹಳ ಕಡಿಮೆ ಇದೆ. ಯಾವುದಾದರೂ ಹೊಸ ಪುಸ್ತಕಗಳು ಈ ಗ್ರಂಥಾಲಯ ಪ್ರವೇಶಿಸ ಬೇಕಾದರೆ ವರ್ಷಗಳೇ ಬೇಕು! ಇನ್ನು ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ದಿನ ಬೆಳಗಾದರೆ ಪತ್ರಿಕೆ ಓದಲು ಹಾಗೂ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅಭ್ಯಾಸಿಸಲು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಕಡಿಮೆಯಿವೆ. ಶೈಕ್ಷಣಿಕ ಸಂಸ್ಥೆಗಳಿಗೆ ಹತ್ತಿರವಿರುವ ಈ ಗ್ರಂಥಾ ಲಯಕ್ಕೆ ದಿನ ನಿತ್ಯ ನೂರಾರು ಮಂದಿ ಭೇಟಿ ಕೊಡುತ್ತಾರೆ.
ಆದ್ದರಿಂದ ಇನ್ನಾದರೂ ಗ್ರಂಥಾ ಲಯ ಇಲಾಖೆ ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಓರ್ವ ಓದುಗ, ಮಂಗಳೂರು

ನಿರ್ಲಕ್ಷ್ಯ ಬೇಡ
ಸುಮಾರು ಒಂದು ಕೋಟಿಯಷ್ಟು ಜನರು ಮಾತನಾಡುವ ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿ ಸೇರ್ಪಡೆಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಸರಿಯಲ್ಲ. ತುಳುನಾಡಿನ ಶ್ರೇಷ್ಠ ಭಾಷೆಗೆ ಸ್ಥಾನಮಾನ ದಕ್ಕಿಸಿಕೊಳ್ಳಲು ತುಳುವರಾದ ನಾವು ಕಾಳಭೈರವನಂತೆ ಕಾರ್ಯಪ್ರವೃತ್ತ ರಾಗಬೇಕು. ಸಮೃದ್ಧವಾದ ತುಳುಭಾಷೆ ಬಗ್ಗೆ ರಾಜಕೀಯ ನಾಯಕರೂ ಗಂಭೀರ ವಾಗಿ ಚಿಂತಿಸಬೇಕಾದ್ದು ಅತ್ಯಗತ್ಯ.
ಜಯರಾಮ ರೈ, ಮಲಾರ್

ರೈತ ಸಂಘಟನೆಯನ್ನು ಟೀಕಿಸಬೇಡಿ
ಮಾರ್ಚ್ ೨೭ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಫಲಿಮಾರು ರೈತ ಸಂಘ ಘಟಕ ಉದ್ಘಾಟನೆ ಕಾರ‍್ಯಕ್ರಮದಲ್ಲಿ ನಿರೂಪಕರ ಮಾತು ಅವರ ಸ್ವಂತ ಅಭಿಪ್ರಾಯವೇ ಹೊರತು ಅದು ರೈತ ಸಂಘದ ಹೇಳಿಕೆಯಲ್ಲ. ಕಾರ‍್ಯಕ್ರಮ ನಿರೂಪಕರ ಅಭಿಪ್ರಾಯಕ್ಕೆ ರೈತ ಸಂಘವನ್ನು ದೂರುವುದು ಸರಿಯಲ್ಲ. ರೈತ ಸಂಘವು ಅಸ್ತಿತ್ವ ಪಡೆಯಲು ಹೋರಾಡುತ್ತಿಲ್ಲ ಬದ ಲಾಗಿ ರೈತರಿಗೆ ಬದುಕುವ ದಾರಿ ತೋರಿಸಲು ಹೋರಾ ಡುತ್ತಿದೆ. ರೈತ ಸಂಘವು ಯಾವುದೇ ಪತ್ರಿಕೆಯ ವಿರುದ್ಧ ಹರಿಹಾಯ್ದಿಲ್ಲ. ರೈತ ಸಂಘದವರು ಪೇಜಾವರ ಮಠಾ ಧೀಶರ ಇಲ್ಲವೇ ಪತ್ರಿಕೆಯವರ ಬಗ್ಗೆ ಅಂಧಾದುಂಧಿ ಕಾರ‍್ಯಕ್ರಮ ಹಮ್ಮಿ ಕೊಂಡಿಲ್ಲ. ರೈತ ಸಂಘ ಹೋರಾಟ ಸಂಘ ಆಗಿರು ವುದರಿಂದ ಈ ಸಂಘದಲ್ಲಿ ನೊಂದವರು, ಸಂತ್ರಸ್ತರು ಇರು ವುದರಿಂದ ಕೆಲವೊಂದು ಸಂದರ್ಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ. ವರದಿಗಾರ ಮಿತ್ರರು ಇದರ ಬಗ್ಗೆ ತಪ್ಪು ತಿಳಿಯಬಾರದು. ರೈತ ಸಂಘದ ಹೋರಾಟ ಯಾರದೇ ವೈಯುಕ್ತಿಕ ಹೋರಾಟವಾಗಿ ರದೆ ಅವಿಭಜಿತ ಜಿಲ್ಲೆಯ ರೈತರ ಅಳಿವು ಉಳಿವಿನ ಹೋರಾಟವಾಗಿದೆ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಫಲಿಮಾರು ರೈತ ಸಂಘ

ಉಳ್ಳಾಲ ದರ್ಗಾ ಅಧ್ಯಕ್ಷರು ಉತ್ತರಿಸುವಿರಾ?
ಸುನ್ನಿ ಅಥವಾ ಇನ್ನಿತರ ಯಾವುದೇ ಮುಸ್ಲಿಂ ಸಂಘಟನೆಗಳ ಕಾರ್ಯಕ್ರಮವು ಉಳ್ಳಾಲ ದರ್ಗಾ ವಠಾರ ದಲ್ಲಿ ಇದುವರೆಗೂ ನಡೆಯಲು ಉಳ್ಳಾಲ ದರ್ಗಾ ಸಮಿತಿಯು ಅವಕಾಶ ಕೊಟ್ಟಿರಲಿಲ್ಲ. ಆದರೆ ಇತ್ತೀಚೆಗೆ ಸುನ್ನಿ ಸ್ಪೂಡೆಂಟ್ಸ್ ಫಡರೇಶನ್ ಉಳ್ಳಾಲ, ಮೇಲಂಗಡಿ ಇದರ ವತಿಯಿಂದ ಕಾರ್ಯಕ್ರಮವು ದರ್ಗಾ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಇದುವರೆಗೂ ದರ್ಗಾ ವಠಾರದಲ್ಲಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಅವಕಾಶ ನೀಡದ ದರ್ಗಾ ಸಮಿತಿ ಕೇವಲ ಎಸ್‌ಎಸ್‌ಎಫ್‌ನ ನಿಷ್ಠಾವಂತ ಕಾರ್ಯಕರ್ತ ಹಾಗೂ ಉಳ್ಳಾಲ ಖಾಝಿಯವರಾದ ತಾಜುಲ್ ಉಲ ಮಾರವರ ಆಪ್ತ ಸಹಾಯಕ ಕರೀಂರವರು ಸಹಕಾರ ನೀಡಿದ್ದರಿಂದ ಅವಕಾಶ ಕೊಟ್ಟಿತ್ತು. ಕರೀಂರವರ ಆಜ್ಞೆಯಂತೆ ಉಳ್ಳಾಲ ಕೇಂದ್ರ ಜಮಾಅತ್‌ನ ಉಪಾಧ್ಯಕ್ಷರ ಅನುಮತಿಯಿಂದ ಈ ಕಾರ್ಯಕ್ರಮ ನಡೆಯು ವಂತಾ ಯಿತು. ಆದರೆ ಇದೇ ಬರುವ ತಿಂಗಳು ಎಪ್ರಿಲ್ ೧೦ರಂದು ಎಸ್‌ಕೆಎಸ್ ಎಸ್‌ಎಫ್‌ನ ಒಂದು ಕಾರ್ಯಕ್ರಮವು ಅದೇ ಸ್ಥಳದಲ್ಲಿ ನಡೆಸಲು ಸಂಘಟಕರು ತೀರ್ಮಾನಿಸಿದ್ದರು. ಆದರೆ ಅನುಮತಿಗಾಗಿ ಉಳ್ಳಾಲ ದರ್ಗಾದ ಉಪಾ ಧ್ಯಕ್ಷರನ್ನು ಸಂಪರ್ಕಿಸಿದಾಗ ಅನುಮತಿ ನೀಡದೆ, ಅಧ್ಯಕ್ಷರಿಲ್ಲ ಎಂಬ ಮಾತನ್ನು ತಿಳಿಸಿಬಿಟ್ಟರು. ಎಸ್‌ಎಸ್‌ಎಫ್ ಕಾರ್ಯ ಕ್ರಮಕ್ಕೆ ಅನುಮತಿ ಕೊಡಲು ಸಾಧ್ಯವಾದ ಉಪಾಧ್ಯಕ್ಷರು ಎಸ್‌ಕೆಎಸ್‌ಎಸ್‌ಎಫ್‌ಗೆ ಏಕೆ ಅವಕಾಶ ಕೊಟ್ಟಿಲ್ಲ?
ಎಸ್‌ಕೆ ಎಸ್ ಎಸ್‌ಎಫ್ ಮತ್ತು ಎಸ್‌ಎಸ್‌ಎಫ್ ಎರಡೂ ಕೂಡಾ ಸುನ್ನಿ ಸಂಘಟನೆಯಾಗಿದ್ದು, ಇದರ ಆಶಯ, ಗುರಿ ಎಲ್ಲವೂ ಒಂದೇ ಆಗಿದೆ. ಅಲ್ಲದೇ ಉಳ್ಳಾಲ ದರ್ಗಾಕ್ಕೆ ಎಲ್ಲ ವರ್ಗದವರು ಕೂಡಾ ಝಿಯಾರತ್ ಆಗಮಿಸುತ್ತಾರೆ. ಇದು ಕೇವಲ ಎಸ್‌ಎಸ್‌ಎಫ್‌ನವರಿಗೆ ಮಾತ್ರ ಸೀಮಿ ತವಾಗಿಲ್ಲ. ಆದರೆ ಎಸ್‌ಕೆಎಸ್‌ಎಸ್‌ಎಫ್‌ನವರು ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಕ್ಕೆ ಉಳ್ಳಾಲ ದರ್ಗಾ ಸಮಿತಿ ಯು ಏಕೆ ಅವಕಾಶ ಮಾಡಿಕೊಡುತ್ತಿಲ್ಲ?
ಇವರ ಆಶಯ, ಗುರಿಗಳಲ್ಲಿ ಏನಾದರೂ ಬದಲಾವಣೆ ಇದೆಯೇ? ಅಲ್ಲದೆ ದರ್ಗಾದಲ್ಲಿ ಇದುವರೆಗೂ ಇಲ್ಲದ ತಾರತಮ್ಯ ನೀತಿ ಇದೀಗ ಹುಟ್ಟಿತಾದರೂ ಏಕೆ ಎನ್ನು ವುದನ್ನು ತಿಳಿಸುವಿರಾ? ಇದಕ್ಕೆ ಉಳ್ಳಾಲ ಕೇಂದ್ರ ಜಮಾಅತ್‌ನ ಅಧ್ಯಕ್ಷರು ಮತು ಸದಸ್ಯರು ಸೂಕ್ತ ಉತ್ತರ ನೀಡುವರೇ?
ಇಸ್ಮಾಯಿಲ್, ಮಂಗಳೂರು

ನಿತ್ಯ ಧೂಳು ಸ್ನಾನ!
ರಾಷ್ಟ್ರೀಯ ಹೆದ್ದಾರಿ ೧೭ ಚತುಷ್ಪಥಗೊಂಡ ಬಳಿಕ ವಾಹನ ಸಂಚಾರ ಸುಗಮವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ರಸ್ತೆಯ ಅಲ್ಲಲ್ಲಿ ಅರೆಬರೆ ಮುಗಿದ ಕಾಮಗಾರಿ, ಇನ್ನೂ ಪೂರ್ತಿ ಗೊಳ್ಳದ ಫ್ಲೈಓವರ್‌ಗಳಿಂದ ವಾಹನ ಸವಾರರು ಸಮಸ್ಯೆಗಳ ನಡುವೆಯೇ ದಿನಕಳೆಯಬೇಕಾಗಿದೆ. ಇಷ್ಟು ಮಾತ್ರವಲ್ಲದೆ ಹೆದ್ದಾರಿ ಗುತ್ತಿಗೆ ಪಡೆದಿರುವ ಬೇಜವಾಬ್ದಾರಿ ಕಂಪೆನಿಯೊಂದು ರಸ್ತೆಯ ಎರಡೂ ಬದಿಗಳಲ್ಲಿ ಧೂಳು ಮಿಶ್ರಿತ ಮಣ್ಣು ತಂದು ಸುರಿದಿದ್ದು, ದ್ವಿಚಕ್ರ ಸವಾರರು, ಪಾದಚಾರಿಗಳಿಗೆ ನಿತ್ಯ ಧೂಳಿನ ಸ್ನಾನ ಮಾಮೂಲಿಯಾಗಿ ಹೋಗಿದೆ. ರಸ್ತೆ ಬದಿಯ ಧೂಳನ್ನು ಸೇವಿಸಿಕೊಂಡೇ ವಾಹನ ಸವಾರರು ಸಂಚಾರ ನಡೆಸುವಂತಾಗಿದೆ. ಈ ಬಗ್ಗೆ ಯಾರಲ್ಲಿಯೂ ಪ್ರಶ್ನಿಸುವಂತಿಲ್ಲ. ಯಾಕೆಂದರೆ ರಸ್ತೆ ಪ್ರಾಧಿಕಾರ, ಜಿಲ್ಲೆಯ ಸಂಸದರು, ಶಾಸಕರು ಮತ್ತಿತರ ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡಾದಂತೆ ವರ್ತಿಸುತ್ತಿದ್ದಾರೆ. ಜನರು ನಿತ್ಯ ಧೂಳು ಸೇವಿಸುತ್ತಾ ಹೆದ್ದಾರಿಯಲ್ಲಿ ಸಂಚರಿಸಿದರೆ ಆರೋಗ್ಯ ಹದಗೆಡುವುದಿಲ್ಲವೇ? ಜನರ ಆರೋಗ್ಯ ರಕ್ಷಣೆಯ ಹೊಣೆ ಯಾರಿಗೆ?
ರೆಹಮಾನ್, ಜೋಕಟ್ಟೆ

ಬಸ್ ನಿಲ್ದಾಣವನ್ನು ನಿರ್ಮಿಸಿ
ಮಂಗಳೂರಿನ ಬಹುತೇಕ ಕಡೆ ರಸ್ತೆ ಅಗಲೀಕರಣ ಕಾರ್ಯ ನಡೆದಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಬಸ್ ತಂಗುದಾಣಗಳನ್ನು ಕೆಡವಿ ಹಾಕಿದ್ದಾರೆ. ಇದರಿಂದ ಬಸ್ ಪ್ರಯಾಣಿಕರು, ವಿದ್ಯಾರ್ಥಿಗಳು ತುಂಬಾ ತೊಂದರೆಗೊಳ ಗಾಗುತ್ತಿದ್ದಾರೆ. ಜನಸಂದಣಿ ಹೆಚ್ಚಿರುವ ಬಂಟ್ಸ್‌ಹಾಸ್ಟೆಲ್, ಬಿಜೈ ಮ್ಯೂಸಿಯಂ, ಸರ್ಕ್ಯೂಟ್‌ಹೌಸ್, ಜ್ಯೋತಿ, ಪಿವಿಎಸ್, ಕೊಡಿಯಾಲ್‌ಬೈಲ್ ಮೊದಲಾದ ಅನೇಕ ಕಡೆಗಳಲ್ಲಿ ಬಸ್ ನಿಲ್ದಾಣವೇ ಮಾಯವಾಗಿದೆ. ಅದಲ್ಲದೆ ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲವಾದ್ದರಿಂದ ಮುಂದಿನ ಮಳೆಗಾಲದಲ್ಲಿ ಇದರ ಪರಿಣಾಮ ಗೊತ್ತಾಗಬಹುದು. ಈ ಬಗ್ಗೆ ಮನಪಾ ಗಮನಹರಿಸುವುದೊಳಿತು.
ಸ್ಟೀವ್ ಮೆಂಡಿಸ್,ಬಿಜೈ

ಕ್ರೀಡಾಂಗಣ ಬದಲಾಯಿಸಬೇಕಿತ್ತು
ಈ ಬಾರಿ ಭಾರತೀಯರು ದೇಶದ ಕ್ರಿಕೆಟ್ ಟೀಂ ಮೇಲೆ ಬಹಳಷ್ಟು ವಿಶ್ವಾಸವನ್ನಿಟ್ಟುಕೊಂಡಿದ್ದಾರೆ. ಅದರಲ್ಲೂ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ನಂತರವಂತೂ ಭಾರತಕ್ಕೆ ಭೀಮ ಬಲ ಬಂದಂತಾಗಿದೆ. ಸೆಮಿಫೈನಲ್ ಪಂದ್ಯಾಟದಲ್ಲಿ ಪಾಕಿಸ್ತಾನ ತಂಡದ ಎದುರು ಆಡಲಿದ್ದು, ಇದರಲ್ಲೂ ಭಾರತವೇ ಗೆಲ್ಲಬೇಕು ಎಂಬುದು ಆಕಾಂಕ್ಷೆ. ಇಷ್ಟರವರೆಗೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತವು ಪಾಕಿಸ್ತಾನದೆದುರು ಸೋಲನ್ನೇ ಕಂಡಿಲ್ಲ. ಆದ್ದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರತವೇ ಗೆಲ್ಲಬಹುದೆಂಬ ನಿರೀಕ್ಷೆ ಇದ್ದೇ ಇದೆ. ಆದರೆ ಈ ಪಂದ್ಯಾಟವನ್ನು ವೀPಸಲು ಮೊಹಾಲಿ ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದ್ದು ಅಲ್ಲಿ ಕೇವಲ ೨೮ ಸಾವಿರ ಪ್ರೇಕ್ಷಕರು ಮಾತ್ರ ಕುಳಿತು ಪಂದ್ಯ ನೊಡಬಹುದಾಗಿದೆ. ಇದರಿಂದಾಗಿ ಬಹಳಷ್ಟು ಪ್ರೇಕ್ಷಕರು ಟಿಕೆಟ್ ಸಿಗದೆ ಹಿಂದಿರುಗುವಂತಾಗಿದೆ. ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟ ನೋಡಲು ಸಿಗುವುದು ಬಹಳ ಅಪರೂಪ. ಆದರೆ ಕ್ರೀಡಾಂಗಣದ ತೊಂದರೆ ಯಿಂದಾಗಿ ಹಲವಾರು ಜನರು ಈ ಭಾಗ್ಯದಿಂದ ವಂಚಿತರಾಗಿದ್ದಾರೆ. ಭಾರತ- ಪಾಕಿಸ್ತಾನ ತಂಡಗಳು ಸೆಮಿಫೈನಲ್ ಎದುರಿಸಲಿದೆ ಎಂದು ಗೊತ್ತಾದ ಕೂಡಲೇ ಸುಮಾರು ೫೦,೦೦೦ ಪ್ರೇಕ್ಷಕರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣಕ್ಕೆ ಪಂದ್ಯಾ ಟವನ್ನು ವರ್ಗಾಯಿಸಬೇಕಿತ್ತು. ಇದು ಹೆಚ್ಚಿನ ಕ್ರೀಡಾಭಿಮಾನಿಗಳಿಗೆ ನಿರಾಶೆಯುಂಟು ಮಾಡುವುದಿಲ್ಲವೇ?
ಶ್ರೀಕಾಂತ್, ಉಪ್ಪಳ

Recent Entries

Recent Comments

Photo Gallery