dailyvideo

Gupta Samalochane

HTML clipboard

ಖಿನ್ನತೆಯಿಂದ ಬಳಲುವ ನನಗೆ ಸಲಹೆ ಕೊಡಿ
ಹೆಸರು;ಬೇಡ: ಊರು;ಕುಂದಾಪುರ
ಸಮಸ್ಯೆ: ನನಗೆ ೪೨ ವರ್ಷ ವಯಸ್ಸು. ನಾನು ಅಧ್ಯಾಪಕ ವೃತ್ತಿಯನ್ನು ಮಾಡಿಕೊಂಡಿದ್ದೇನೆ. ನನಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ನನ್ನ ಪತ್ನಿಗೆ ಈಗ ೩೫ವರ್ಷ ವಯಸ್ಸು. ನನಗೆ ಯಾವುದೇ ಖಾಯಿಲೆಗಳು ಇಲ್ಲ, ನಾನು ಸದಾ ಆನಂದ ದಿಂದ ಇರುತ್ತೇನೆ. ಶಾಲೆಯಲ್ಲೂ ಅಷ್ಟೇ ಸಹೋದ್ಯೋಗಿಗಳಿಂದ ಹಿಡಿದು ಮಕ್ಕಳವರೆಗೆ ಎಲ್ಲರ ಜೊತೆ ಬೆರೆಯುತ್ತೇನೆ. ನನಗೆ ಯಾರೊಂದಿಗೂ ಗಲಾಟೆ ಮಾಡಿ ಗೊತ್ತಿಲ್ಲ. ನನ್ನ ಪತ್ನಿ ನನಗಿಂತ ಸುಂದರಿ. ಆಕೆಯ ಸೌಂದರ್ಯವನ್ನು ನೋಡಿಯೇ ನಾನು ಪ್ರೀತಿಸಿ ಮದುವೆಯಾಗಿದ್ದು. ನಮ್ಮ ನಡುವಿನ ದಾಂಪತ್ಯ ಚೆನ್ನಾಗಿದೆ. ಆಕೆಗೆ ಸೆಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿಯಿದೆ. ನನಗೆ ಕೆಲವು ಸಮಯದ ಹಿಂದೆ ಸೆಕ್ಸ್‌ನಲ್ಲಿ ಆಸಕ್ತಿಯಿತ್ತು. ಆದರೆ ಈಗ ಆಸಕ್ತಿ ಕಡಿಮೆಯಾಗಿದೆ. ಸಂಜೆಯಾಯಿತೆಂದರೆ ಮೌನವೇ ಒಳ್ಳೆಯದು. ಪತ್ನಿ, ಮಕ್ಕಳು ಯಾರೊಂದಿಗೂ ಮಾತಾಡುವುದು ಬೇಡ ಎಂದೆನಿಸುತ್ತದೆ. ರಾತ್ರಿ ಎಷ್ಟು ಬೇಗ ಮಲಗಿದರೂ ತುಂಬಾ ಹೊತ್ತು ನಿದ್ದೆ ಬರುವುದಿಲ್ಲ. ನನ್ನ ಪತ್ನಿ ನನ್ನನ್ನು ಉತ್ತೇಜಿಸಿದರೂ ಸೆಕ್ಸ್‌ನಲ್ಲಿ ಆಸಕ್ತಿ ಬರುವುದಿಲ್ಲ. ಹಾಗೇ ಸುಮ್ಮನೆ ಮಲಗುತ್ತೇನೆ. ವಾರಕ್ಕೆ ಒಂದು ಬಾರಿ ಇಲ್ಲವೇ ಎರಡು ವಾರಕ್ಕೊಮ್ಮೆ ಸೆಕ್ಸ್ ಮಾಡುತ್ತೇವೆ. ಈ ವೇಳೆಯೂ ಹೆಚ್ಚು ಹೊತ್ತು ತೊಡಗಿಕೊಳ್ಳಲಾಗುವುದಿಲ್ಲ. ಜನನಾಂಗ ಬೇಗನೆ ಶಕ್ತಿ ಕಳೆದುಕೊಳ್ಳುತ್ತದೆ. ನನ್ನ ಪತ್ನಿ ನನ್ನಲ್ಲಿ ಈ ಬಗ್ಗೆ ಹೇಳದೇ ಇದ್ದರೂ ಆಕೆ ಒಳಗೊಳಗೇ ನೋಯುತ್ತಾಳೆ ಎಂದು ಅನಿಸುತ್ತದೆ. ಎದೆಯಲ್ಲಿ ಉರಿ ಬಂದಂತಾಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದರಲ್ಲೂ ಹಿಂದಿನ ಆಸಕ್ತಿ ಉಳಿದಿಲ್ಲ. ಜೀವನವೇ ಬೇಸರ ಆದಂತೆ ಅನಿಸಲು ಕಾರಣವೇನು? ನನ್ನ ಸಮಸ್ಯೆಗೆ ದಯವಿಟ್ಟು ಸಲಹೆ ಕೊಡಿ.
ಸಲಹೆ: ನೀವು ಒಂದೇ ರೀತಿಯ ಕೆಲಸ, ಒತ್ತಡದ ವಾತಾವರಣದಲ್ಲಿ ಇರುವುದರಿಂದ ನಿಮ್ಮಲ್ಲಿ ಇಂತಹ ಸಮಸ್ಯೆ ತಲೆದೋರಿರುವ ಸಾಧ್ಯತೆಯಿದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಖಿನ್ನತೆ ಎಂದೂ ಕರೆಯುತ್ತಾರೆ. ಇದು ಸಾಮಾನ್ಯ ಮಾನಸಿಕ ರೋಗದ ಲಕ್ಷಣವೂ ಆಗಿದೆ. ಇದನ್ನು ಈಗಲೇ ನಿಯಂತ್ರಣಕ್ಕೆ ತಂದರೆ ಒಳ್ಳೆಯದು. ಕೂಡಲೇ ಹತ್ತಿರದ ಮಾನಸಿಕ ತಜ್ಞರ ಬಳಿ ಸಮಾಲೋಚನೆ ನಡೆಸಿ. ಇದಕ್ಕೆ ಚಿಕಿತ್ಸೆಯಿದೆ, ಚಿಂತೆ ಬೇಡ. ಮುಂಜಾನೆ ಬೇಗನೆ ಎದ್ದು ವಾಕಿಂಗ್ ಮಾಡಿ ಇದರಿಂದ ನೀವು ದಿನವಿಡೀ ಉಲ್ಲಸಿತರಾಗಿರುತ್ತೀರಿ. ಸಾಕಷ್ಟು ನೀರು ಕುಡಿಯಿರಿ. ಕರಿದ ಪದಾರ್ಥ, ಖಾರ, ಮಸಾಲೆಯುಕ್ತ ಆಹಾರ ತ್ಯಜಿಸಿ. ಲೈಂಗಿಕ ಕ್ರಿಯೆಯಲ್ಲಿ ವಯಸ್ಸಾದಂತೆ ಸಮಸ್ಯೆ ಸಾಮಾನ್ಯ. ಇದನ್ನು ಆಸನ ಬದಲಾಯಿಸುವಿಕೆ ಇಲ್ಲವೇ ಸ್ವ-ಚಿಕಿತ್ಸೆಯಿಂದ ಪರಿಹರಿಸಬಹುದು. ರಜೆ ಮಾಡಿಕೊಂಡು ಒಂದು ವಾರದ ಕಾಲ ಕುಟುಂಬ ಸಮೇತ ಎಲ್ಲಾದರೂ ಹೊರಗಡೆ ತಿರುಗಾಡಿ ಬನ್ನಿ. ಪತ್ನಿಯೊಂದಿಗೆ ಪ್ರೀತಿ ತೋರಿಸಿ, ಸಂಭೋಗದ ಹೊರತು ಇನ್ನಿತರ ವಿಧಾನದಿಂದ ಸುಖ ಪಡುವುದನ್ನು ಹಾಗೂ ಕೊಡುವುದನ್ನು ಕಲಿತುಕೊಳ್ಳಿ.

ನಮಗೆ ಬರೆಯಿರಿ
ಓದುಗರೇ,
ನಿಮ್ಮಲ್ಲಿ ಯಾರಲ್ಲೂ ಹೇಳಲಾಗದ, ಯಾರೊಂದಿಗೂ ಹಂಚಿಕೊಳ್ಳಲಾಗದ ಅನೇಕ ಸಮಸ್ಯೆಗಳಿರಬಹುದು. ಕೆಲವು ಸಮಸ್ಯೆಗೆ ಪರಿಹಾರ ಕಂಡುಕೊಂಡರೂ ಮತ್ತೂ ಕೆಲವು ಸಮಸ್ಯೆಗಳು ನಿಮ್ಮನ್ನು ಬೆಂಬಿಡದೆ ಕಾಡುತ್ತಿರಬಹುದು. ಈ ಬಗ್ಗೆ ಯಾರಲ್ಲಿ ಹೇಳೋಣ ಎಂಬ ಚಿಂತೆ ಬೇಡ. ಜಯಕಿರಣ ಪತ್ರಿಕೆ ನಿಮ್ಮ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಸೂಕ್ತ ಸಲಹೆ ನೀಡಲಿದೆ. ಗುಪ್ತವಾಗಿ ಚರ್ಚಿಸುವ ಯಾವುದೇ ಸಮಸ್ಯೆಗಳನ್ನು ನಮ್ಮ ವಿಳಾಸಕ್ಕೆ ಬರೆದು ಕಳುಹಿಸಿ. ನಿಮ್ಮ ಹೆಸರು, ವಿಳಾಸ ಬಹಿರಂಗವಾಗುವ ಭಯ ಬೇಡ. ಆದರೆ ಹೆಸರು, ವಿಳಾಸ, ಫೋನ್ ನಂಬರ್ ಅಗತ್ಯವಾಗಿ ಬರೆಯಿರಿ. ವಿಳಾಸವಿಲ್ಲದ ಪತ್ರಗಳು ಪ್ರಕಟಣೆಗೊಳ್ಳುವುದಿಲ್ಲ. ಅಂಚೆ ಲಕೋಟೆಯ ಮೇಲೆ ‘ಗುಪ್ತ ಸಮಾಲೋಚನೆ ವಿಭಾಗ’ ಎಂದು ಸ್ಪಷ್ಟವಾಗಿ ಬರೆಯಿರಿ.

Recent Entries

Recent Comments

Photo Gallery