dailyvideo

ಲಂಕಾ ಫೈನಲಿಗೆ

HTML clipboard
ಕೊಲಂಬೊ: ನ್ಯೂಜಿಲೆಂಡ್ ಮತ್ತೊಮ್ಮೆ ಸೆಮಿಫೈನಲಿನಲ್ಲಿ ಎಡವಿದ್ದು, ಕಡಿಮೆ ಮೊತ್ತದ ಪಂದ್ಯದಲ್ಲಿ ಶ್ರೀಲಂಕಾಗೆ ತೀವ್ರ ಹೋರಾಟ ನೀಡಿದ ಕಿವೀಸ್ ಫೈನಲಿಗೇರುವ ಕನಸು ಭಗ್ನವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡ ಕಿವೀಸ್ ೪೮.೫ ಓವರ್‌ಗಳಲ್ಲಿ ೨೧೭ ರನ್‌ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನತ್ತಿದ ಲಂಕಾ ಪಡೆ ೪೭.೫ ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ ೨೨೦ ರನ್ ಸೇರಿಸಿ ಜಯ ಗಳಿಸುವುದರ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು.
ಕಿವೀಸ್ ಪರ ಸ್ಟೈರಿಸ್ (೫೭) ಅರ್ಧಶತಕ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಸ್ಟೈರಿಸ್ ತನ್ನ ನಿಧಾನ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳನ್ನು ಬಾರಿಸಿದ್ದರು. ಆರಂಭಿಕ ಗಪ್ಟಿಲ್ (೩೯) ಹಾಗೂ ಟೇಲರ್ (೩೬) ಉತ್ತಮ ಆಟವಾಡಿದರೂ ಇದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಮೆಕ್‌ಕಲಮ್ (೧೩), ರೈಡರ್ (೧೯) ಹಾಗೂ ವಿಲಿಯಂಸನ್ (೨೨) ಕಡಿಮೆ ಮೊತ್ತಕ್ಕೆ ನಿರ್ಗಮಿಸಿದ್ದು ತಂಡ ಸಾಧಾರಣ ಮೊತ್ತಕ್ಕೆ ತೃಪ್ತಿ ಪಡುವಂತಾಯಿತು. ಒಂದು ಸಮಯ ದಲ್ಲಿ ೮೪ ರನ್‌ಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ಸ್ಟೈರಿಸ್ ಹಾಗೂ ಟೇಲರ್ ಜೋಡಿ ನಾಲ್ಕನೇ ವಿಕೆಟ್‌ಗೆ ೭೭ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಚೇತರಿಕೆ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ಕ್ಷಿಪ್ರ ಗತಿಯಲ್ಲಿ ವಿಕೆಟ್ ಕಳೆದುಕೊಂಡಿದ್ದು ಸಾಧಾರಣ ಮೊತ್ತ ಪೇರಿಸಲು ಕಾರಣವಾಯಿತು. ಮೆಂಡಿಸ್ ಹಾಗೂ ಮಲಿಂಗಾ ತಲಾ ಮೂರು ವಿಕೆಟ್ ಪಡೆದರು.
ಶ್ರೀಲಂಕಾ ಬ್ಯಾಟಿಂಗ್ ಪರ ದಿಲ್ಶಾನ್ (೭೩) ಹಾಗೂ ಸಂಗಕ್ಕರ (೫೪) ಆಕರ್ಷಕ ಅರ್ಧಶತಕ ಸಿಡಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ೧೨೦ ರನ್‌ಗಳ ಮಹತ್ವ ಪೂರ್ಣ ಜೊತೆಯಾಟ ನಡೆಸಿತು. ಒಂದು ಹಂತದಲ್ಲಿ ಲಂಕಾ ೧೮೫ ರನ್‌ಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮ್ಯಾಥ್ಯೂಸ್ (೧೪) ಹಾಗೂ ಸಮರವೀರ (೨೩) ಆರನೇ ವಿಕೆಟ್‌ಗೆ ಅಜೇಯ ೩೫ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಜಯ ತಂದು ಕೊಟ್ಟರು. ತರಂಗ ೩೦ ರನ್ ದಾಖಲಿಸಿದ್ದರು. ಜಯವರ್ಧನೆ (೧) ಹಾಗೂ ಚಾಮರ ಸಿಲ್ವಾ (೧೩) ಬ್ಯಾಟಿಂಗ್‌ನಲ್ಲಿ ವಿಫಲಗೊಂಡರು.

Posted by Jayakirana Morning Daily on 01:07. Filed under . You can follow any responses to this entry through the RSS 2.0

0 comments for �ಲಂಕಾ ಫೈನಲಿಗೆ�

Leave comment

Recent Entries

Recent Comments

Photo Gallery